Advertisement

ಹಾಸನ,ಮಂಡ್ಯ ಜಿಲ್ಲೆಗಳಲ್ಲಿ ಲಘು ಭೂಕಂಪ-A Mild Earthquake Of Hassan

ಹಾಸನ,ಮಂಡ್ಯ ಜಿಲ್ಲೆಗಳಲ್ಲಿ ಲಘು ಭೂಕಂಪ-A Mild Earthquake Of  Hassan ಮAಡ್ಯ/ಹಾಸನ: ರಾಜ್ಯದ ಹಾಸನ,ಮಂಡ್ಯ ಜಿಲ್ಲೆಗಳ ಕೆಲ ಭಾಗಗಳಲ್ಲಿ ಇಂದು ಸಂಜೆ ಭೂಮಿ ಲಘುವಾಗಿ ಕಂಪಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ ೨.೬ ದಾಖಲಾಗಿದೆ.
ಅಂದ ಹಾಗೇ ಸಂಜೆ ೫.೧೮ರ ಸುಮಾರಿನಲ್ಲಿ ಭಾರಿ ಶಬ್ದದೊಂದಿಗೆ ಹಲವು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ ಅನುಭವ ಜನರಿಗಾಗಿದ್ದು, ಕೂಡಲೇ ಜನರು ಮನೆಗಳಿಂದ ಹೊರಗೋಡಿ ಬಂದಿದ್ದಾರೆ.
ಇನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹಲವೆಡೆ ಶುಕ್ರವಾರ ಸಂಜೆ ಭೂಮಿ ಲಘುವಾಗಿ ಕಂಪಿಸಿದೆ.
ಈ ತಾಲ್ಲೂಕಿನ ಕಾಳೇನಹಳ್ಳಿ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಸಂಜೆ ೫.೨೦ರ ವೇಳೆಗೆ ಕೆಲ ಸೆಕೆಂಡುಗಳ ಕಾಲ ಭೂಮಿ ನಡುಗಿದ ಭೂಕಂಪಕ್ಕೆ ಮನೆಗಳು ಅಲುಗಾಡಿವೆ.
ಇನ್ನು ಅರಕಲಗೂಡು ಪಟ್ಟಣ,ಸಂತೆಮರೂರು ಬೆಳವಾಡಿ ಕರ್ಕಿಕೊಪ್ಪಲು ಕೂನನಕೊಪ್ಪಲು ದಡದಹಳ್ಳಿ ಅರಕಲಗೂಡು ವಡ್ಡರಹಳ್ಳಿ ಹೊನವಳ್ಳಿ,ದುಮ್ಮಿ,ನಿಲುವಾಗಿಲು,ರಾಮನಾಥಪುರ,ಕಾಳೇನಹಳ್ಳಿ,ಕೇರಳಾಪುರ,ಸೋಂಪುರ ಇನ್ನೂ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.ಹೀಗೆ ಸುಮಾರು ೨೫ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದ್ದು ಯಾವುದೇ ಅನಾಹುತ ,ಹಾನಿಗಳು ಸಂಭವಿಸಿಲ್ಲ.
ಇನ್ನು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ.ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಿಂಗನಹಳ್ಳಿ, ಜೈನಹಳ್ಳಿ, ಮಾಚಹೊಳಲು, ವಡ್ಡರಗುಡಿ, ಸಾಕ್ಷಿಬೀಡು, ಬಿರವಳ್ಳಿ ಸೇರಿದಂತೆ ಹಲವು ಕಡೆ ಭೂಕಂಪದ ಅನುಭವವಾಗಿದೆ.
ಒಟ್ಟಾರೆ ಮೊದಲೇ ಕರೋನಾ ಭೀತಿ ಹಿಂದಿರುವ ಜನರ ಆತಂಕವನ್ನು ಈ ಘಟನೆ ಮತ್ತಷ್ಟು ಹೆಚ್ಚಿಸಿದೆ.ಅದರಲ್ಲೂ ಮಹಿಳೆಯರು ಮಕ್ಕಳಲ್ಲಿ ಭೀತಿ ಹುಟ್ಟಿಸಿದೆ ಎಂದು ಕಲೆ ನಲ್ಲಿ ನಿವಾಸಿ ನಾರಾಯಣ್ ಭೂಕಂಪದ ಅನುಭವವನ್ನು ಹಂಚಿಕೊAಡರು.
#Mysuru #Earthquake #KRNagar #Hassan #Lockdown #Coronavirus

Hassan

Post a Comment

0 Comments